RAMARANI RESERCH CENTRE DHAWALATRYA JK TRUST(R) MOODBIDRI
ಇಲ್ಲಿಯ ಧವಲತ್ರಯ ಜೈನಕಾಶಿ ಟ್ರಸ್ಟ್ (ರಿ.) ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಸದಾ ನಿರಂತರ ನಡೆಸುತ್ತಿದ್ದು ಇದೊಂದು ಸದುದ್ದೇಶವನ್ನುಳ್ಳ ಚಾರಿಟಬಲ್ ಸಂಸ್ಥೆಯಾಗಿದೆ. ಧವಲತ್ರಯ ಜೈನಕಾಶಿ ಟ್ರಸ್ಟ್ (ರಿ.), ಮೂಡುಬಿದಿರೆ ಇದು ಸಾವಿರ ಕಂಬದ ಬಸದಿ ರಸ್ತೆಯ ರಮಾರಾಣಿ ಶೋಧ ಸಂಸ್ಥಾನದ ಕಟ್ಟಡ ನಂಬ್ರ ೬-೧೮೭ಮತ್ತು ೬-೧೮೭(೧)ರ ಬಳಿ ಇದೆ. ಈ ಸಂಸ್ಥೆಯ ಮೂಲಕ ಶಿಕ್ಷಣ, ಸಾಮಾಜಿಕ ಅಸಮತೋಲನದ ನಿವಾರಣೆ, ವೈದ್ಯಕೀಯ ನೆರವು, ಸಂಶೋಧನೆ, ಪ್ರಾಚೀನ ಗ್ರಂಥಗಳ ಸಂರಕ್ಷಣೆ ಸಂವರ್ಧನೆ ಹಾಗೂ ಪ್ರಕಾಶನದ ಮೂಲಕ ದೇಶದಲ್ಲೇ ಪ್ರಸಿದ್ಧವಾದ ಸಂಸ್ಥೆಯಾಗಿ ಬೆಳೆಯುತ್ತಿದೆ. ಇಲ್ಲಿಯ ರಮಾರಾಣಿ ಶೋಧ ಸಂಸ್ಥಾನ ಪ್ರಸಿದ್ಧ ಪ್ರಾಚೀನ ಶ್ರೀಮಂತ ತಾಡ ಪ್ರತಿಗಳನ್ನು ಹಾಗೂ ಅಪರೂಪದ ತಾಮ್ರ ಪತ್ರ ಮತ್ತು ಶಾಸನಗಳನ್ನು ಉಳ್ಳ ಏಕೈಕ ದಿಗಂಬರ ಜೈನ ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಯಾಗಿದ್ದು ಪುಟ್ಟ ಪಾರಂಪರಿಗಕ ನಗರವಾದ ಮೂಡುಬಿದಿರೆಯ ಹತ್ತು ಹಲವು ಉತ್ತಮ ಸಂಸ್ಥೆಗಳಲ್ಲಿ ಇದೂ ಒಂದಾಗಿದ್ದು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಹಾಗೂ ಮಾನ್ಯ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ರವರ ಹಸ್ತದಲ್ಲಿ ಪ್ರಸಿದ್ಧ ಉದ್ಯಮಿ ಸಾಹು ಶಾಂತಿಪ್ರಸಾದ್ ಜೈನ್ ರವರ ಧರ್ಮಪತ್ನಿ ರಮಾರಾಣಿ ಜೈನ್ ರವರ ಹೆಸರಿನಲ್ಲಿ ಆಚಾರ್ಯ ವಿದ್ಯಾನಂದ ಮುನಿವರ್ಯರ ಹಾಗೂ ಇಲ್ಲಿಯ ಅಂದಿನ ಭಟ್ಟಾರಕರ ಉಪಸ್ಥಿತಿಯಲ್ಲಿ ಪ್ರಾರಂಭಗೊಂಡ ಸಂಸ್ಥೆಯಾಗಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ವಿದ್ವಾಂಸರು ಈ ಸಂಸ್ಥೆಗೆ ಭೇಟಿ ಕೊಡುತ್ತಾರೆ. ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸಂಶೋಧನೆಗೆ ಆಶ್ರಯ ನೀಡುತ್ತಿರುವ ಸಂಸ್ಥಾನವಾಗಿದ್ದು ಯಾವುದೇ ಅನುದಾನವನ್ನು ಈವರೆಗೆ ಪಡೆದಿರುವುದಿಲ್ಲ.
No comments:
Post a Comment