ಝೆಕ್ ರಿಪಬ್ಲಿಕ್ ದೇಶದ ಜೈನ ವಿದ್ವಾಂಸ
ಜೋಸೆಫ್ ಶ್ರೀ ಜೈನಮಠ ಭೇಟಿ
ಝೆಕ್ ರಿಪಬ್ಲಿಕ್ ದೇಶದ ಹಿರಿಯ ವಿದ್ವಾಂಸರಾದ
ಶ್ರೀಯುತ ಜೋಸೆಫ್‌ರವರು ಜೈನಧರ್ಮದ ಬಗ್ಗೆ ವಿಶೇಷ ಅಧ್ಯಯನನಿರತರಾಗಿದ್ದು ಓರ್ವ ಅಪರೂಪದ ವಿದೇಶೀ ವಿದ್ವಾಂಸರಾಗಿದ್ದಾರೆ.
ಹಿರಿಯ ಕನ್ನಡ ಸಾಹಿತಿ ನಾಡೋಜ ಡಾ. ಹಂ. ಪ. ನಾಗರಾಜಯ್ಯನವರ ಸಲಹೆ ಮೇರೆಗೆ ಕರ್ನಾಟಕದಲ್ಲಿ ದಿಗಂಬರ
ಜೈನ ಪರಂಪರೆ ಎಂಬ ವಿಚಾರವಾಗಿ ವಿಶೇಷ ಅಧ್ಯಯನ ನಿರತರಾಗಿದ್ದು ಈಗಾಗಲೇ ಕರ್ನಾಟಕದ ಅನೇಕ ಜೈನ ಕೇಂದ್ರಗಳನ್ನು
ಭೇಟಿ ಮಾಡಿ ಮೂಡುಬಿದಿರೆ ಶ್ರೀಮಠದ ಪೂಜ್ಯ ಶ್ರೀಶ್ರೀಗಳವರೊಂದಿಗೆ ವಿಶೇಷ ಅಧ್ಯಯನಕ್ಕಾಗಿ ಕಳೆದ ೩
ದಿನಗಳಿಂದ ವಾಸ್ತವ್ಯವಿದ್ದು ಅನೇಕ ವಿಚಾರಗಳ ಬಗ್ಗೆ ಮಾಹಿತಿಯನ್ನು ಪಡೆದರು. ೧೩. ೫. ೨೦೧೪ರಂದು ಮಂಗಳವಾರ
ಸಂಜೆ ಶ್ರೀಮಠದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ ಸುಮಾರು ಇಪ್ಪತ್ತು ವರ್ಷಗಳಿಂದ
ಜೈನಧರ್ಮದ ಬಗ್ಗೆ ವಿಶೇಷ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು ಜೈನಧರ್ಮದ ಸಪ್ತಭಂಗಿನಯ, ಸಸ್ಯಾಹಾರ,
ಆತ್ಮಧರ್ಮದ ಬಗೆಗಿನ ಸಿದ್ಧಾಂತ, ಜೈನಧರ್ಮದ ಬಗ್ಗೆ ಕುತೂಹಲ ಮೂಡಿ ಅಧ್ಯಯನಶೀಲನಾಗಿದ್ದು ರಾತ್ರಿ ಭೋಜನವನ್ನು
ಬಿಟ್ಟು ಸಂಪೂರ್ಣ ಜೈನ ಸಸ್ಯಾಹಾರಿಯಾಗಿದ್ದು ದಿನದಲ್ಲಿ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸುತ್ತಿದ್ದು
ಮಾನಸಿಕ ನೆಮ್ಮದಿ ಹಾಗೂ ಶಾಂತಿ ಜೈನಧರ್ಮದಿಂದ ಸಿಗುತ್ತಿದೆ ಎಂದು ನುಡಿದರು. ಸ್ಥಳೀಯ ಕ್ಷೇತ್ರಕಾರ್ಯವನ್ನು
ಮಾಡಿ ಅಧ್ಯಯನನಿರತರಾದ ಶ್ರೀಯುತರನ್ನು ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ
ಮಹಾಸ್ವಾಮಿಗಳವರು ಶಾಲು ಹಾಕಿ ಶ್ರೀಫಲಮಂತ್ರಾಕ್ಷತೆಯನ್ನಿತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿ ಹರಸಿ
ಆಶೀರ್ವದಿಸಿದರು.
ಶ್ರೀಯುತರು ಮೇ ೧೬ ಮತ್ತು ೧೭ ರಂದು ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ
ಕ್ಷೇತ್ರಕಾರ್ಯ ನಿರ್ವಹಿಸಿದರು ಅವರ ಜೊತೆ ಸ್ವಸ್ತಿಶ್ರೀ ಪ. ಪೂ. ಕಾಲೇಜಿನ ಸಂಚಾಲಕ ಶ್ರೀ ರಘುವೀರ
ಮುದ್ಯ ಹಾಗೂ ಸನತ್ ಕುಮಾರ್ ಜೈನ್, ಮಂಗಳೂರು ಜೊತೆಗಿದ್ದರು. ಹಾಗೂ ೧೭, ೧೮, ೧೯, ೨೦ರಂದು ಕಾರ್ಕಳ,
ಹೆಬ್ರಿ, ವರಂಗ, ಶಿರ್ಲಾಲು, ನೆಲ್ಲಿಕಾರು, ಚೆಂಡೆ ಬಸದಿ, ನಲ್ಲೂರು, ಅಪ್ಪಾಯಿ ಬಸದಿ, ನಾರಾವಿ, ಮುಂತಾದೆಡೆ
ಜೈನ ಮದುವೆ ಪದ್ಧತಿ, ಗುತ್ತಿನ ಮನೆ, ಹಾಗೂ ಜಾತ್ರೆ ಸಂಭ್ರಮ, ಪೂಜಾ ಅಭಿಷೇಕ ಮುಂತಾದ ಬಗೆಗೆ ಅಧ್ಯಯನ
ಹಾಗೂ ಕ್ಷೇತ್ರಕಾರ್ಯ ಮಾಡಿದರು. ಕಾರ್ಕ ಸುತ್ತಮುತ್ತಲಿನ ಅಧ್ಯಯನ ಕಾರ್ಯಕ್ಕೆ ಹಿರಿಯ ನ್ಯಾಯವಾದಿ
ಶ್ರೀ ಎಂ. ಕೆ. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ
ವರ್ಧಮಾನ ಇವರು ಶ್ರೀ ಜೋಸೆಫ್ ರವರಿಗೆ ಸಹಕಾರ ನೀಡಿದರು. ಶ್ರೀಯುತರು ಕರ್ನಾಟಕದಾದ್ಯಂತ ಅನೇಕ
ತೀರ್ಥಕ್ಷೇತ್ರಗಳ ಸಂದರ್ಶನ ಹಾಗೂ ಕ್ಷೇತ್ರಕಾರ್ಯ ಮಾಡಲಿರುವರು.
No comments:
Post a Comment