Thursday, October 24, 2019

ದೀಪಾವಳಿ ಹಬ್ಬ 27,28,29-10-2019ಮಹಾವೀರ ನಿರ್ವಣೋತ್ಸವ 27-10-19

ಈ ಬಾರಿಯ ದೀಪಾವಳಿ ಹಬ್ಬ ಆಚರಣೆಯ ಬಗ್ಗೆ ಮೂಡು ಬಿದಿರೆ ಪರಮಪೂಜ್ಯ ಸ್ವಸ್ಥಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಯವರು ಸರ್ವ ರಿಗೊ ಭಗವಾನ್ ಮಹಾ ವೀರ ಸ್ವಾಮಿ ನಿರ್ವಾಣ ಕಲ್ಯಾಣ ದೀಪಾವಳಿ ಹಬ್ಬದ ಶುಭಾಶೀರ್ವಾದ ತಿಳಿಸಿರುತ್ತಾರೆ
ನಮ್ಮ ಜೈನ ಜ್ಯೋತಿಷ್ಯ ತಜ್ಞ ರು ನಿರ್ಣಯಿಸಿದ ಮಹಾವೀರ ನಿರ್ವಣೋತ್ಸವ ದೀಪಾವಳಿ ಗೆ ಸಂಬಂಧ ಪಟ್ಟ ಮಾಹಿತಿ
ಈ ಕೆಳಗಿನಂತಿದೆ
*ತಾರೀಕು 27.10.2019 ರವಿವಾರ ಚತುರ್ದಶಿ ತಿಥಿ ೧೫ ಘಳಿಗೆ ಅಂದರೆ 12.23 ಮದ್ಯಾಹ್ನ ದವರೆಗೆ ಆಚಾರಿ ಸ ಲು ಯೋಗ್ಯವಾಗಿದೆ
Bhagwaan Mahaveer nirvana
ಮಹಾವೀರ ನಿರ್ವಣೋತ್ಸವ 27.10.19
ತಾರೀಕು 28.10.2019 ಸೋಮವಾರ ಅಮಾವಾಸ್ಯೆ ತಿಥಿ ೬lll ಘಳಿಗೆ ಅಂದರೆ 09.08 ಬೆಳಿಗ್ಗೆ ವರೆಗೆ. ನಂತರ ಪಾಡ್ಯ ಕ್ಷಯತಿಥಿ 06.13 ಬೆಳಿಗ್ಗೆ ವರೆಗೆ. (ಸೂರ್ಯ ಉದಯ 06.23)
*ತಾರೀಕು 29.10.2019 ಮಂಗಳವಾರ ಬಿದಿಗೆ ತಿಥಿ
ಈ ಬಾರಿ ಪಾಡ್ಯ ತಿಥಿ, ಕ್ಷಯ ತಿಥಿಯಾಗಿ ಸೂರ್ಯ ಉದಯ ಸಮಯಕ್ಕೆ ಇಲ್ಲದಿರುವುದರಿಂದ 28.10.2019 ಸೋಮವಾರ ,2 ದೀಪಾವಳಿ ಪೂಜೆ ಆಚರಣೆ.
ದೀಪಾವಳಿ ಹಬ್ಬಕ್ಕೆ ರಾತ್ರಿ ಅಮಾವಾಸ್ಯೆ ಪ್ರಾಮುಖ್ಯವಾಗಿ ಇರಬೇಕಾಗಿರುವುದರಿಂದ ಹಾಗೂ 27.10.2019 ರವಿವಾರದಂದು ಅಮಾವಾಸ್ಯೆ ತಿಥಿ ಅಧಿಕವಾಗಿರುವುದರಿಂದ, ಅಂದೇ ದೀಪಾವಳಿ ಆಚರಣೆ. ಪಂಚಾಂಗಗಳಲ್ಲಿ ಈ ಮೇಲಿನಂತೆಯೇ ನಿರ್ಣಯಿಸಿದ್ದಾರೆ. ಸಮಸ್ತ ಜೈನ ಸಮಾಜ ಬಾಂದವರು ಈ ಬಗ್ಗೆ ವಿಚಾರ ಮಾಡಿ ಸೂಕ್ತ ನಿರ್ಣಯವನ್ನು ತೆಗೆದು ಕೊಳ್ಳುದು

26-10-19 ಶನಿವಾರ ಜಗತ್ಪ್ರ ಸಿದ್ದ ಸಾವಿರ ಕಂಬ ದ ಬಸದಿ ಯಲ್ಲಿ ಪಂಚಾ ಮೃತ ಅಭಿಷೇಕ


ಧರ್ಮಬಂದುಗಳೇ 
27-10-2019 ರಂದು
ಭಗವಾನ್ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ ಪ್ರಯುಕ್ತ ಮುನ್ನ ದಿನವಾದ 26-10-19 
ಶನಿವಾರ ಜಗತ್ಪ್ರ ಸಿದ್ದ ಸಾವಿರ ಕಂಬ ದ ಬಸದಿ ಯಲ್ಲಿ
ಶ್ರೀಜೈನಮಠ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ) ಜೈನ್ ಮಿಲನ್ ಮೂಡಬಿದಿರೆ,ಸರ್ವ ಮಂಗಳ ಮಹಿಳಾ ಸಂಘ ಮೂಡುಬಿದಿರೆ
ಸಹಯೋಗದೊಂದಿಗೆ ಭಗವಾನ್ ಚಂದ್ರಪ್ರಭ ಸ್ವಾಮೀಗೆ ಸಂಜೆ 6.35ರಿಂದ ಪಂಚಾ ಮೃತ ಅಭಿಷೇಕ ಮಹಾ ಮಂಗಳಾರತಿ
ಅಷ್ಟ ವಿಧಾರ್ಚನೆ 26-10-19 
ಶನಿವಾರ ಜಗತ್ಪ್ರ ಸಿದ್ದ ಸಾವಿರ ಕಂಬ ದ ಬಸದಿ ಯಲ್ಲಿ
ರಾತ್ರಿ
7.35ರಿಂದ ಭಾಗವಾನ್ ಮಹಾ ವೀರ ಸ್ವಾಮಿ ಪೂಜೆ,ಭಜನೆ ಧಾರ್ಮಿಕ ವೈವಿಧ್ಯಮಯ ಕಾರ್ಯಾ ಕ್ರಮ ಹಮ್ಮಿ ಕೊಳ್ಳ ಲಾ ಗಿ ದೆ
ಧರ್ಮಬಂದುಗಳಾದ ತಾವಲ್ಲರೊ ಹೆಚ್ಹಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಾ ಕ್ರಮ ಚಂದ ಗಾಣಿಸಿ ಕೊಡ ಬೇಕಾಗಿ ಅಪೇಕ್ಷೆ
ಇತಿ ಶ್ರೀ ಶ್ರೀ ಗಳವರ ಅಪ್ಪಣೆ ಮೇರೆಗೆ
ಶ್ರೀಸಂಜಯಂಥ ಕುಮರ್ ಶೆಟ್ಟಿ
ವ್ಯೆವಸ್ಥಾಪಕರು

ಶ್ರೀದಿಗಂಬರ ಜೈನ ಮಠ ಮೂಡಬಿದಿರೆ

Saturday, September 14, 2019

AHARA DANA MOODBIDRI JIV DAYA ASTAMI

|| ¨sÀUÀªÁ£ï NA ²æÃ 1008 ¥Á±Àéð£ÁxÁAiÀÄ £ÀªÀÄB ||
                                   || ²æÃ PÀƵÁäAr¤Ã zÉëà ¥Àæ¸À£Áß ||

                             ²æÃ eÉÊ£ÀªÀÄoÀ
          ಸ್ವಸ್ಥಿ ಶ್ರೀ ಭಟ್ಟಾರಕ ನಗರ,ರಾ. ಹೆ.169 ಜೈನ ಪೇಟೆ, ಜೈನ ಕಾಶಿ ಮೂಡಬಿದಿರೆ
                      08258-236318/236418 www.jainkashi.com, jainkashi@yahoo.com

¸ÀzÀÞªÀÄð §AzsÀÄUÀ¼ÉÃ,
¸Àé¹Û²æÃ ªÀĺÁ«ÃgÀ ±ÀPÀ 2545 £Éà ರವಿವಾರ ¢£ÁAPÀ 06-10-2019 gÀAzÀÄ zÉñÁzÀåAvÀ fêÀzÀAiÀiÁµÀÖ«Ä ¥ÀªÀðªÀ£ÀÄß «dÈA¨sÀuɬÄAzÀ DZÀj¸À¯ÁUÀÄwÛzÉ. F ¨sÁjAiÀÄÆ eÉÊ£À PÁ² ªÀÄÆqÀ©¢gÉAiÀİè JA¢£ÀAvÉ £ÀªÉÄä®è ¸ÀªÀiÁd ¨ÁAzsÀªÀgÀ ¸ÀºÀPÁgÀ¢AzÀ ¥À. ¥ÀÆ. ZÁgÀÄQÃwð ¨sÀmÁÖgÀPÀ ¥ÀArvÁZÁAiÀÄðªÀAiÀÄð ²æÃUÀ¼ÀªÀgÀ ¢ªÀå ªÀiÁUÀðzÀ±Àð£ÀzÀ°è CAzÀÄ £ÀªÉÄä®ègÀ ¥À«vÀæ PÉëÃvÀæPÉÌ ಬರುವ zÀ±Àð£ÁyðUÀ½UÉ ¸ÁªÀÄÆ»PÀ ±ÀÄzÀÞ ¨sÉÆÃd£À ªÀåªÀ¸ÉÜ ªÀiÁqÀ¯ÁUÀĪÀÅzÀÄ. DºÁgÀ zÁ£À ±ÉæÃµÀ× zÁ£ÀªÁVzÀÄÝ

                   DºÁgÀB¸ÀªÀð fêÁ£ÁA ¸ÀzÀåB ¸ÀÄRB «zÁAiÀÄPÀB
zsÁå£ÁzsÀåAiÀÄ£À PÀªÀiÁðt PÀvÀÄðA vÀ¸Áävï PÀëªÉÆÃ £ÀgÀB
C£ÀßzÁ£À¸ÀªÀÄA zÁ£ÀA £À ¨sÀÆvÀA ¨sÀĪÀ£ÀvÀæAiÉÄÃ
£À ¨sÀªÀvÀå¦ £ÉÆ ¨sÁ« vÀvÉÆÃ£ÉÆåà ¯ÉÆÃ¨sÀªÀzsÀðPÀB
²æÃµÉÃt ¸ÀªÀĨsÀÆzÁæeÁºÁgÀzÁ£Ávï ¥Àæ¹zÀÞ¨sÁPï
±ÁAwñÀ¹ÛÃxÀðPÉÊZÀÒQæÃ ¯ÉÆÃPÁ£ÁA ¸ÀÄRzÁAiÀÄPÀB
JAzÀÄ w½¹zÀAvÉ ¸ÀªÀĸÀÛ fëUÀ½UÉ vÀPÀëtªÉà ¸ÀÄRªÀ£ÀÄßAlÄ ªÀiÁqÀĪÀ zsÁå£À-CzsÀåAiÀÄ£À ªÉÆzÀ¯ÁzÀ ¸ÀwÌçAiÉÄUÀ½UÉ ZÉÊvÀ£Àå ¤ÃqÀ§®è ¥ÀÄtåPÁgÀåPÉÌ vÁªÀÅ vÀ£ÀÄ-ªÀÄ£À-zsÀ£À ¸ÀºÀPÁgÀªÀ¤ßvÀÄÛ JA¢£ÀAvÉ ¸ÀºÀPÀj¸ÀĪÀÅzÀÄ. ªÀÄ£ÉAiÀĪÀgÉ®ègÀÆ DUÀ«Ä¹ PÉëÃvÀæ zÀ±Àð£À ªÀiÁr ¥ÀÄtå ¯Á¨sÀ UÀ½¸ÀĪÀÅzÀÄ.

    ¨É½UÉÎ UÀAmÉ 6-05jAzÀ             18 §¸À¢ zÀ±Àð£À
    ¨É½UÉÎ UÀAmÉ 11.00                   ಪುಸ್ತಕ ಬಿಡುಗಡೆ
    ¨É½UÉÎ UÀAmÉ   11.35-2.00     ¸ÁªÀÄÆ»PÀ ±ÀÄzÀÞ ¨sÉÆÃd£À   
    ¸ÀAeÉ UÀAmÉ             04-00jAzÀ  ²æÃ UÀÄgÀÄUÀ¼À §¸À¢AiÀÄ°è ªÀĺÁ©üµÉÃPÀ,

                                    Ewà ¥À. ¥ÀÆ. ªÀÄÆqÀÄ©¢gÉ ²æÃ,  ²æÃ ²æÃUÀ¼ÀªÀgÀ C¥ÀàuÉ ªÉÄÃgÉUÉ 
                                                                             
                                                                            ಸಂಜಯ೦ತ ಕುಮರ್ ಶೆಟ್ಟಿ

                     ªÀåªÀ¸ÁÜ¥ÀPÀgÀÄ ,²æÃ eÉÊ£ÀªÀÄoÀ ªÀÄÆqÀÄ©¢gÉ

KARGIL VICTORY JULY 26

ಕಾರ್ಗಿಲ್ ವಿಜಯ ದಿವಸ

ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ್ ನ ನಂತರ ಹೆಸರಿಸಲ್ಪಟ್ಟಿದೆ . ಈ ದಿನ, 26 ಜುಲೈ 1999, ಭಾರತ ಯಶಸ್ವಿಯಾಗಿ ಪಾಕಿಸ್ತಾನಿ ಒಳನುಗ್ಗುವವರನ್ನು ತಡೆಹಿಡಿದು ,ವಿಜಯ ಸಾಧಿಸಿತು. ಕಾರ್ಗಿಲ್ ಯುದ್ಧ ಜುಲೈ 26 ರಂದು ಕೊನೆಗೊಂಡಿತು. 60ಕ್ಕೂ ಹೆಚ್ಚು ದಿನಗಳಕಾಲ ನಡೆದ ಈ ಯುದ್ಧ ಎರಡೂ ಕಡೆಗಳಲ್ಲಿ( ಭಾರತ ಮತ್ತು ಪಾಕಿಸ್ತಾನ) ಭಾರಿ ಪ್ರಮಾಣದ ಸಾವುನೋವುಗಳಿಗೆ ಕಾರಣವಾಯಿತು. ಪಾಕಿಸ್ತಾನ ಅಂತರರಾಷ್ಟ್ರೀಯ ರಾಜತಾಂತ್ರಿಕ ಒತ್ತಡಡ ನಂತರ ಈ ಅಭಿಯಾನದಿಂದ ಹಿಂತೆಗೆದುಕೊಳ್ಳುವಂತಾಯಿತು .
ಕಾರ್ಗಿಲ್ ವಿಜಯ್ ದಿವಸ, ಕಾರ್ಗಿಲ್ ಸಮರದ ವೀರರ ಗೌರವಾರ್ಥ ಪ್ರತಿವರ್ಷ ಜುಲೈ 26 ರಂದು ಆಚರಿಸಲ್ಪಡುತ್ತಿದೆ . - ಕಾರ್ಗಿಲ್ ವಲಯ ಮತ್ತು ರಾಷ್ಟ್ರೀಯ ರಾಜಧಾನಿಯಾದ ದೆಹಲಿಯಲ್ಲಿ ಭಾರತದ ಪ್ರಧಾನಮಂತ್ರಿಯವರಿಂದ ಅಮರ್ ಜವಾನ್ ಜ್ಯೋತಿಗೆ ಗೌರವಾರ್ಪಣ ಮಾಡುವುದರ ಮೂಲಕ ಸಶಸ್ತ್ರ ಪಡೆಗಳ ಕೊಡುಗೆಯನ್ನು ನೆನಯಲಾಗುತ್ತದೆ.
ಇಂದು ಕಾರ್ಗಿಲ್ ಯುದ್ಧದ ವಿಜಯ ದಿವಸ. ಯುದ್ಧವಾಗಿ ಇಂದಿಗೆ 18 ವರ್ಷಗಳೇ ಕಳೆದಿವೆ.
ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ
ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ.
ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ.
1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್‌ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರತೀಯ ಸೇನೆ ಹೊಸದಾಗಿ ಯಾವ ಪ್ರದೇಶ ವಶಪಡಿಸಿಕೊಂಡಿತು ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜೊತೆಗೆ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಸುದ್ದಿ ಕೇಳಿ ಕಣ್ಣೀರು ಮಿಡಿದವರೆಷ್ಟೋ. ಯುದ್ಧ ಮುಗಿಯುವವರೆಗೆ ದೇಶ ತನ್ನೆಲ್ಲ ಮಾಮೂಲು ಸಮಸ್ಯೆಗಳನ್ನು ಬದಿಗಿಟ್ಟು ಕಾರ್ಗಿಲ್ ಕದನದ ಸುದ್ದಿಗಳಿಗಾಗಿ ಕಣ್ಣು, ಕಿವಿ ತೆರೆದು ಕುಳಿತಿದ್ದಂತೂ ನಿಜ. ಹಿಂದೆಂದೂ ಕಾಣದಂತಹ ಏಕತೆ ಈ ಯುದ್ಧದ ಸಂದರ್ಭದಲ್ಲಿ ಕಂಡುಬಂತು.
ಇದೇನು ನಾವಾಗಿ ಬಯಸಿದ ಯುದ್ಧವಲ್ಲ. ಕಾಲು ಕೆರೆದು, ಜಗಳ ತೆಗೆದು ನಾವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡದ್ದಲ್ಲ. ನಿಜವಾಗಿ ಹೇಳುವುದಾದರೆ, ಲಾಹೋರ್‌ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ (ಯುದ್ಧ ಆಗಲು ಬಿಡುವುದಿಲ್ಲ) ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರ್‌ನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಅದರಂತೆಯೇ ಅವರು ನಡೆದುಕೊಂಡರು.
ಆದರೆ ಆಗಿದ್ದೇ ಬೇರೆ. ಇಡೀ ಜಗತ್ತೇ ಬದಲಾವಣೆಯ ಹಾದಿ ತುಳಿಯುತ್ತಿದ್ದರೂ ಪಾಕಿಸ್ಥಾನ ಮಾತ್ರ ಭಾರತದ ವಿರುದ್ಧದ ತನ್ನ ದ್ವೇಷ ಭಾವನೆ ತೊರೆಯಲಿಲ್ಲ. ಆಕ್ರಮಣಕಾರಿ ಪ್ರವೃತ್ತಿಯನ್ನು ಅದು ಮರೆಯಲಿಲ್ಲ. ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಕುಲುಕಿದ ಅದು ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರ್‌ನಲ್ಲಿ ನವಾಜ್ ಶರೀಫ್ ವಾಜಪೇಯಿ ಅವರು ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು. ಯುದ್ಧದ ಸಿದ್ಧತೆ ಸಾಗಿತ್ತು. ಭಾರತದ ಸ್ನೇಹಕ್ಕೆ ಪಾಕ್ ನೀಡಿದ ಬೆಲೆ ಇಂತಹದು !
ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿ ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ಪಂಡಿತ್ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ಕೊನೆಗೂ ವಿಜಯಲಕ್ಷ್ಮಿ ಒಲಿದದ್ದು ನಮಗೇ.
ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ. ಬಹುಶಃ ಜಗತ್ತಿನಲ್ಲೇ ಇದೊಂದು ಕಠಿಣತಮ ಯುದ್ಧ ಆಗಿರಬಹುದು. ದುರ್ಗಮ ಪರ್ವತದೆತ್ತರವನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಇನ್‌ಫೆಂಟ್ರಿಗೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವು ಬಾರಿ ಇಡೀ ರಾತ್ರಿ ಯುದ್ಧ ಮಾಡಬೇಕಾಗಿ ಬಂದರೆ ಇನ್ನು ಕೆಲವು ಸಲ 36 ಗಂಟೆಗಳ ಕಾಲ ಶತ್ರುಪಡೆಯೊಂದಿಗೆ ಸೆಣಸಿದ ಸಂದರ್ಭಗಳೂ ಉಂಟು. ಭೂಸೈನ್ಯದ ಜೊತೆ ಆರ್ಟಿಲರಿ ಹಾಗೂ ವಾಯುದಳ ಕೂಡ ಹೋರಾಡಿತು. ಸೇನೆಯ ವೈದ್ಯಾಧಿಕಾರಿಗಳು ಅಸುರಕ್ಷಿತ ಬಂಕರ್‌ಗಳಲ್ಲಿ ಗಾಯಗೊಂಡು ಕುಸಿದುಬಿದ್ದಿದ್ದ 584 ಕ್ಕೂ ಹೆಚ್ಚು ಯೋಧರ ಶುಶ್ರೂಷೆಯಲ್ಲಿ ಹಗಲಿರುಳೂ ಶ್ರಮಿಸಿದರು. ಭಾರತ ಸೇನೆ ಇದುವರೆಗೆ ಕಂಡ ಅತ್ಯಂತ ಕಠಿಣ ಯುದ್ಧವಿದಾಗಿತ್ತು. ಈ ಯುದ್ಧದಲ್ಲಿ ಒಂದೋ ಹೋರಾಡಬೇಕಿತ್ತು, ಇಲ್ಲವೇ ಹೋರಾಡುತ್ತಾ ಮಡಿಯಬೇಕಾಗಿತ್ತು. ಬೇರೆ ಅವಕಾಶವೇ ಅವರಲ್ಲಿರಲಿಲ್ಲ. ಹಿಮ್ಮೆಟ್ಟುವ ಸಾಧ್ಯತೆಯಂತೂ ಇರಲೇ ಇಲ್ಲ. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು. ಜುಲೈ 14 ರಂದು ಅಟಲ್ ಬಿಹಾರಿ ವಾಜಪೇಯಿಯವರು ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಆದರೆ ಕಾರ್ಗಿಲ್ ಯುದ್ಧ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಭಾರತೀಯ ಸೇನೆ ಪಾಕ್ ನುಸುಳುಕೋರರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಘೋಷಿಸಿದ ದಿನ ಜುಲೈ 26 ರಂದು. ಆದ್ದರಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ.
ಕಾರ್ಗಿಲ್ ಕದನ ಇಡೀ ದೇಶದ ಮಾನಸಿಕತೆಯ ಮೇಲೆ ಆಳವಾದ ಮುದ್ರೆಯೊತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಲಡಾಖ್‌ನಿಂದ ನಾಗಾಲ್ಯಾಂಡ್‌ವರೆಗೆ ದೇಶದುದ್ದಗಲಕ್ಕೆ ದೇಶಭಕ್ತಿಯ ಪ್ರವಾಹವೇ ಹರಿದಿದೆ. ಯುದ್ಧದಲ್ಲಿ ಹುತಾತ್ಮರಾದ ವೀರಯೋಧರನ್ನು ಇಡೀ ದೇಶ ಹೀರೋಗಳಂತೆ ಕಂಡು ಗೌರವ ಸಲ್ಲಿಸಿದೆ, ಆರಾಧಿಸಿದೆ. ಜಾತಿ, ಮತ, ಧರ್ಮ, ಪ್ರಾಂತ, ಭಾಷೆ ಯಾವುದೂ ಇದಕ್ಕೆ ಅಡ್ಡಿಯಾಗಲಿಲ್ಲವೆನ್ನುವುದು ವಿಶೇಷ. ದೆಹಲಿಯ ಸಮೀಪವಿರುವ ನೊಯ್ಡಾಕ್ಕೆ ಲೆಫ್ಟಿನೆಂಟ್ ವೈಜಯಂತ್ ಥಾಪರ್ ಅವರ ಪಾರ್ಥಿವ ಶರೀರ ಆಗಮಿಸಿದಾಗ, ಅವರ ಅಂತ್ಯಕ್ರಿಯೆಗಾಗಿ ಇಡೀ ಊರು ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಿತ್ತು. ದಲಿತ ಜಾತಿಗೆ ಸೇರಿದ ಸಿಪಾಯಿ ದಿನೇಶ್ ವಘೇಲಾರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೇಳೆ ಗುಜರಾತಿನ ಖೇಡಾ ಜಿಲ್ಲೆಯ ನಿರ್ಮಲಿ ಗ್ರಾಮದ ಎಲ್ಲ ಜಾತಿಯವರೂ ಒಟ್ಟಾಗಿ ಸೇರಿ ಆತನ ವೀರಮರಣಕ್ಕೆ ಕಣ್ಣೀರು ಹಾಕಿದರು. ಆ ಯೋಧನ ಪರಾಕ್ರಮಕ್ಕೆ ಅವರೆಲ್ಲ ಹೆಮ್ಮೆಪಟ್ಟರು. ಈ ಯುದ್ಧ ಇಡೀ ದೇಶವನ್ನೇ ಒಂದುಗೂಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಟೈಗರ್ ಹಿಲ್ಸ್, ತೊಲೊಲಿಂಗ್ ಹಿಮಪರ್ವತಗಳು ಸಿಖ್ಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲೆಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು… ಹೀಗೆ ಎಲ್ಲರ ರಕ್ತದಿಂದ ತೊಯ್ದಿದೆ. ಈ ರಕ್ತದ ಕಲೆಗಳ ಮೇಲೆ ಮತ್ತೆ ಚಳಿಗಾಲದಲ್ಲಿ ಹಿಮ ಹರಡಿಕೊಳ್ಳಲಿದೆ. ಆದರೆ ಅವರೆಲ್ಲರ ತ್ಯಾಗ, ಬಲಿದಾನಗಳು ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ ಇದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆಗೆ ಖಂಡಿತ ಆಶ್ಚರ್ಯಚಕಿತವಾಗದೇ ಇರದು. ಭಾರತದ ಆತ್ಮಶಕ್ತಿ ಸುಪ್ತವಾಗಿರಬಹುದು. ಆದರೆ ಸಮಯ ಬಂದಾಗ ಅದು ಜಾಗೃತವಾಗಿ ಇಡೀ ದೇಶವನ್ನು ಬಡಿದೆಬ್ಬಿಸಬಲ್ಲದೆಂಬುದಕ್ಕೆ ಕಾರ್ಗಿಲ್ ಕದನ ಒಂದು ಜ್ವಲಂತ ಸಾಕ್ಷಿ.
ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು, ಅದರ ಕೆಳಗೊಂದು ವಾಕ್ಯ :
ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ : ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ.
ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ, ಗಾಳಿಗೆ ತೊಯ್ದು ಮಸುಕಾಗಿದೆ. ಬರಹ ಮಸುಕಾದರೇನು ? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮಾತ್ರ ನೆನಪಿಸುತ್ತಿದೆ. ಕಾರ್ಗಿಲ್ ಕದನ ಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರು ನಮ್ಮೆಲ್ಲರ ನಾಳೆಗಳಿಗಾಗಿ ತಮ್ಮ ಈ ದಿನಗಳನ್ನು ಬಲಿದಾನ ಮಾಡಿದ್ದಾರೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ, ಟಿ. ವಿ. ಚಾನೆಲ್‌ಗಳಲ್ಲಿ ಜಾಹೀರಾತೊಂದು ತೇಲಿಬರುತ್ತಿತ್ತು. ‘They didn’t go down fighting for their lives in Kargil : but for ours’ ಅದರ ಹಿಂದೆಯೇ ಮತ್ತೊಂದು ವಾಕ್ಯ ತೇಲಿಬರುತ್ತಿತ್ತು. ‘They die for a stranger. And that stranger is you.’
ನಿಜ, ಕಾರ್ಗಿಲ್ ಕದನದಲ್ಲಿ ಸುಮಾರು 527 ಕ್ಕೂ ಹೆಚ್ಚು ವೀರ ಯೋಧರು ನಮಗಾಗಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಸುಮಾರು 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಈಗಲೂ ಅನೇಕರು ದೇಶಕ್ಕಾಗಿ ಹುತಾತ್ಮರಾಗುತ್ತಲೇ ಇದ್ದಾರೆ. ಹದಿನೆಂಟು ಸಹಸ್ರ ಅಡಿಯೆತ್ತರಕ್ಕೆ ತಲುಪಿ ವೈರಿಪಡೆಯನ್ನು ಚೆಂಡಾಡುವುದು ಅಷ್ಟು ಸುಲಭವೇನಲ್ಲ. ಭಾರತೀಯ ಸೈನ್ಯ ಇದುವರೆಗೆ ಕಾದಾಡಿದ ಕದನಗಳಲ್ಲಿ ಕಾರ್ಗಿಲ್ ಸಮರ ಅತ್ಯಂತ ಕಠಿಣವಾದುದು. 1965 ಹಾಗೂ 1971 ರಲ್ಲಿದ್ದಂತೆ ಈ ಬಾರಿ ಇನ್‌ಫ್ರೆಂಟಿಯನ್ನು ಬೆಂಬಲಿಸುವ ಟ್ಯಾಂಕುಗಳಿಲ್ಲ. ಗತಪ್ರಾಣನಾಗಿ ಬಿದ್ದಾಗ ವಾಯುದಳದ ನೆರವು ಕೋರುವಂತಿರಲಿಲ್ಲ. ಯುದ್ಧರಂಗದಿಂದ ತಪ್ಪಿಸಿಕೊಂಡು ಸುರಕ್ಷಿತ ತಾಣಕ್ಕೆ ತಲುಪುವ ಪ್ರಶ್ನೆಯೇ ಈ ಬಾರಿ ಇರಲಿಲ್ಲ. ಹಾಗೆಂದೇ ಕಾರ್ಗಿಲ್ ಯುದ್ಧಕ್ಕೆ ತೆರಳಿದ ನಮ್ಮ ಸೈನಿಕರೊಬ್ಬೊಬ್ಬರದ್ದೂ ಒಂದೊಂದು ಸಾಹಸಗಾಥೆ. ಇವರಲ್ಲದೆ ರಾಷ್ಟ್ರಕ್ಕೆ ಪ್ರಾಣದೀವಿಗೆಯಾಗಿ ತಾಯ್ನಾಡಿಗಾಗಿ ತಲೆಯೊಡ್ಡಿದವರು ಇನ್ನೆಷ್ಟೋ … ಅಂತಹ ಎಲ್ಲಾ ಮಹಾನ್ ಚೇತನಗಳಿಗೆ ನಮ್ಮ ಶತಶತ ನಮನಗಳು.
ಈ ವಿಜಯ ದಿವಸದ ನೆನಪಿನೊಂದಿಗೆ ಸಮಾಜದಲ್ಲಿರುವ ಪ್ರತಿಯೊಬ್ಬ ಯುವಕರೂ ಸೈನಿಕರಂತೆ ದೇಶ, ಧರ್ಮ ರಕ್ಷಣೆಗೆ ತಮ್ಮ ಕರ್ತವ್ಯವನ್ನು ಪಾಲಿಸಿದಲ್ಲಿ ಸ್ವಸ್ಥ ಸಮಾಜದೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರತಿಯೊಬ್ಬ ಯುವಕರು ನಾಡಿನ ರಕ್ಷಣೆಗೆ ಮುಂದಾಗುತ್ತಾ ಸೈನಿಕರು ಗಡಿಯಲ್ಲಿ ನಾಡ ರಕ್ಷಣೆ ಮಾಡಿದಂತೆ ಹಾಗೂ ಸೈನಿಕರು ಶತ್ರುಗಳನ್ನು ದೇಶದಿಂದ ಹೊರಗಟ್ಟಿ ಈ ವಿಜಯದಿವಸ ಆಚರಣೆ ಮಾಡಿದ ರೀತಿಯಲ್ಲಿ ನಾವೆಲ್ಲರೂ ಸೇರಿ ಸಮಾಜದ ಸೈನಿಕರಾಗಿ ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ಹೊರಗಟ್ಟುವ ಸಂಕಲ್ಪ ಮಾಡೋಣ.
ಕಾಶ್ಮೀರದ ಶ್ರೀನಗರದಿಂದ ೨೦೫ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, ೦೪೮ ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. ೧೬೦ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.
`ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಖೂ. ಸಿಯಾಚಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಈ ಪ್ರದೇಶಕ್ಕೆ ತನ್ನ ಸೇನೆ ನುಗ್ಗಿಸಿತ್ತು. ಈ ಆಕ್ರಮಣಕ್ಕೆ ಪಾಕಿಸ್ತಾನಕ್ಕೀ ಸೇನೆ ಕೊಟ್ಟ ಹೆಸರು `ಆಪರೇಷನ್ ಬದ್ರ್'.
ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ ೧೯೯೯ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ `ಆಪರೇಶನ್ ವಿಜಯ್'. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯವದು. ಸಮುದ್ರಮಟ್ಟದಿಂದ ಅತೀ ಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು.
೬೦ದಿನಗಳ ಕಾಲ ರಾತ್ರಿ ಹಗಲೂ ಸತತ ಕಾದಾಟದ ನಂತರ ೫೭೨ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಕ್ಕೆ ೧೯೯೯ರ ಜುಲೈ ೨೬ರಂದು ವಿಜಯ ಸಿಕ್ಕಿತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ `ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್ ರಣಾಂಗಣದಲ್ಲಿ ಜೀವದ ಹಂಗು ತೊರೆದು ಹೋರಾಡಿ ಮಡಿದ ಹಲವಾರು ಯೋಧರ ಜೀವನಗಾಥೆಗಳು ಸಂಕ್ಷಿಪ್ತವಾಗಿ ಬಿಂಬಿಸುವ ಪ್ರಯತ್ನ ಇಲ್ಲಿದೆ.
ಜಸ್ವಿಂದರ್ ಸಿಂಗ್ ಭರವಸೆ:
"ನೀನೆನೂ ಹೆದರಬೇಕಾಗಿಲ್ಲ. ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ" - ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿದುಂಬಿದ ತನ್ನ ೨೦ರ ಹರೆಯದ ಪತ್ನಿ ಗುರುದಯಾರ್ ಕೌರ್ಗೆ ಸಿಪಾಯಿ ಜಸ್ವಿಂದರ್ ಸಿಂಗ್ ಬೆಚ್ಚನೆಯ ಭರವಸೆ ಇತ್ತ. ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧಭೂಮಿಗೆ ಹೊರಟಿದ್ದ.
ಕೌರ್ ಜಸ್ವಿಂದರ್ಸಿಂಗ್ನನ್ನು ಮದುವೆಯಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೆ. ಕಂಗಳ ತುಂಬಾ, ಮನದ ತುಂಬಾ ಅದೇನೇನೋ. ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು, ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂಬ ಲೆಕ್ಕಾಚಾರ ಹಾಕಿದ್ದಳು.
ಗುರುದಯಾರ್ ಕೌರ್ ತನ್ನ ಪತಿ ಜಸ್ವಿಂದರ್ ಸಿಂಗ್ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೆ. ಅದೇ ಆಕೆಯ ದಾಂಪತ್ಯ ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತ ಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ವಿಂದರ್ ಸಿಂಗ್ ಪ್ಲೈವು ಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.
ಜಸ್ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಆಂಧ್ರ ರೈತ. ಮೂರು ಎಕರೆ ಜಮೀನು ಹೊಂದಿರುವ ಅತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರ ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರ್ಯ ಜಸ್ವಿಂದರ್ ಸಿಂಗ್ ೧೭ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸದ ಬದುಕಿಗೆ ಆಸರೆ ನೀಡಿತು.
ಮೇ ೨೧ರಂದು ಜಸ್ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ. ಶಿಖರದೆತ್ತರದಲ್ಲಿ ಬಂಕರ್ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ. ವೈರಿಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ. ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡೂ ತೊಡೆಗಳಿಗೆ ಎಲ್ಲಿಂದಲೋ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ. ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.
ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ಧಿ, ಚಿತ್ರ ಬರುವದೋ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದೆರಡು ದಿನದಲ್ಲೇ ಜಸ್ವಿಂದರ್ ಸಿಂಗ್ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳುತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ತಿ ನೆಟ್ಟಿರುವ ಕೌರ್ ಈಗ ಮ್ಲಾನವದನೆ.
ಜಸ್ವಿಂದರ್ ಸಿಂಗ್ ವೀರಮರಣ ಅಪ್ಪಿದ್ದಕ್ಕೆ ತಂದೆಗೆ ದುಃಖವಿಲ್ಲ. "ಶತ್ರುವಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು." ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರ್ಎ.
"ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದಪ್ಪಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗುಳಿದಿರುವ ಸಮಾಧಾನ." - ದಾಂಪತ್ಯದ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದುಃಖವನ್ನು ತಡೆದೊತ್ತಿ ಹೇಳುತ್ತಾಳೆ.
ಹೌದು, ಜಸ್ವಿಂದರ್ ಸಿಂಗ್ನ ಸಾವು ವ್ಯರ್ಥವಾಗುವದಿಲ್ಲ.
ಕಾರ್ಗಿಲ್ ಕದನ : ಕೆಲವು ವಿವರಗಳು
ಕಾಲಮಿತಿ :
ಯುದ್ಧ ನಡೆದ ಒಟ್ಟು ಅವಧಿ : ೭೪ ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : ೧೫೦ ಕಿ.ಮೀ.
ಬಳಸಿದ ಬಲಾಬಲ
ಭಾರತೀಯ ಸೇನೆ : ೨೦,೦೦೦
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : ೧೫೦೦
ಶಸ್ತ್ರಾಸ್ತ್ರ ಬಳಕೆ
ಆರ್ಟಿಲರಿ : ೩೦೦ (೧೦೦ ಬೊಫೋರ್ಸ್ ಬಂದೂಕುಗಳೂ ಸೇರಿದಂತೆ)
ಶೆಲ್‍ಗಳು (ಪ್ರತಿನಿತ್ಯ) : ೫,೦೦೦
ಟೋನೇಜ್ (ಪ್ರತಿನಿತ್ಯ) : ೧೫,೦೦೦
ವಾಯುಬಲ
ಸ್ಟ್ರೈಕ್ ಮಿಶನ್ಸ್ : ೫೫೦
ರೆಕನೈಸಾನ್ಸ್ : ೧೫೦
ಎಸ್ಕಾರ್ಟ್ ಮಿಶನ್ : ೫೦೦
ಚಾಪರ್ ಸಾರ್ಟೀಸ್ : ೨,೧೮೫
ಮಡಿದವರು
ಭಾರತಸೇನೆ : ೪೦೭
ಗಾಯಗೊಂಡವರು : ೫೮೪
ನಾಪತ್ತೆಯಾದವರು : ೬
ಪಾಕ್ ಸೇನೆ ಮಡಿದವರು : ೬೯೬
ಯುದ್ಧ ವೆಚ್ಚ
ದೈನಂದಿನ ಸರಾಸರಿ ವೆಚ್ಚ : ೧೫ ಕೋಟಿ ರೂ.
ಒಟ್ಟು ವೆಚ್ಚ : ೧,೧೦೦ ಕೋಟಿ ರೂ.
ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳು
*ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)
* ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)
* ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)
ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)
* ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)
* ನಾಯಕ ಶಿವಬಸಯ್ಯ ಕುಲಕರ್ಣಿ, ೨೦ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)
* ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)
* ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)
* ಎಸ್.ಕೆ.ಮೇದಪ್ಪ, ಮರಾಠಾ ಲೈಟ್ ಇನ್‍ಫೆಂಟ್ರಿ (ಕಿರಂಗನದೂರು, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ)
* ದಾವಲಸಾಬ್ ಅಲಿಸಾಬ್ ಕಂಬಾರ್, ಬಿ.ಎಸ್.ಎಫ್. (ಬಲವಟ್ ಗ್ರಾಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ)
* ಸುಬೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ (ವಿರಾಜಪೇಟೆ, ಕೊಡಗು ಜಿಲ್ಲೆ)
* ಲಾನ್ಸ್ ನಾಯಕ್ ಎಚ್.ವಿ.ವೆಂಕಟ್ (ಅಗ್ರಹಾರ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ)
* ಲಾನ್ಸ್ ನಾಯಕ್ ಯಶವಂತ ಕೋಲಕಾರ (ಮೇಕಲಮರಡಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ)
* ದಿಲೀಪ ಪೀರಪ್ಪ ಪೋತ್ರಾಜ (ಗದ್ಯಾಳ ಗ್ರಾಮ, ಜಮಖಂಡಿ ತಾಲೂಕು, ಬಿಜಾಪುರ ಜಿಲ್ಲೆ)
* ಗೋವಿಂದ ಶೆಡೋಳೆ (ವರದಟ್ಟಿ ಗ್ರಾಮ, ಭಾಲ್ಕಿ ತಾಲೂಕು, ಬೀದರ ಜಿಲ್ಲೆ)

Posted by