Tuesday, March 29, 2022

birthday 29 march 2022

 

🌸ಇಂದು ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಮೂಡಬಿದ್ರಿ ಅವರ ಜನ್ಮದಿನ🌸
⭕ ಜೈನ ದರ್ಶನದ ಪ್ರಖಾಂಡ ಪಂಡಿತರು, ರತ್ನಕರಂಡಕ ವಿಶಾರದರು,ಜೈನ ಧರ್ಮದ ಪ್ರಚಾರದಲ್ಲಿ ಶ್ರದ್ಧೆವುಳ್ಳವರು, ಲೇಖಕರು, ಪ್ರಖಾಂಡ ವಾಗ್ಮಿಗಳು, ಅಸಾಧಾರಣ ಪ್ರತಿಭಾಶಾಲಿಗಳು, ವಾಸ್ತು ಶಾಸ್ತ್ರಜ್ಞರು, ಕಲೆಯ ಪ್ರವರ್ತಕರು, ಆಶ್ರಯದಾತರು, ದಕ್ಷಿಣ ಕಾಶಿಯ 18 ಬಸದಿಗಳ ಶ್ರೇಯೋಭಿವೃದ್ಧಿಗಾಗಿನ ಪ್ರೆರಕರೂ ಆದ ಶ್ರೀಗಳ ಜನ್ಮದಿನ ಇಂದು. ಆ ಹಿನ್ನೆಲೆಯಲ್ಲಿ ಶ್ರೀಗಳ ಸಂಕ್ಷಿಪ್ತ ಪರಿಚಯ:
⭕ದಿನಾಂಕ 29-03-1970ರಲ್ಲಿ ಸುಮ್ಮಗತ್ತಿನ ಶ್ರೀ ಎಂ ಕೆಂಚಪ್ಪ ಹೆಗ್ಡೆ ಹಾಗೂ ಶ್ರೀಮತಿ ಲಲಿತಾ ದಂಪತಿಗಳ ತೃತೀಯ ಸುಪುತ್ರರಾಗಿ ಜನಿಸಿದರು. ಪೂರ್ವಾಶ್ರಮದ ಹೆಸರು:ಕು. ಅರವಿಂದ. ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಬಜಗೋಳಿಯಲ್ಲಿ, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಿಯುಸಿಯನ್ನು, ಹಾಗೂ ಕಾರ್ಕಳದ ಶ್ರೀಮಠದಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದು ಕೊಂಡರು. ಬಳಿಕ ಮಣಿಪಾಲದಲ್ಲಿ ಕಂಪ್ಯೂಟರ್ ತರಬೇತಿ ಹಾಗೂ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.
⭕ಜೈನ ಧಾರ್ಮಿಕ ವ್ರತ-ನಿಷ್ಠೆ ಸ್ವಾಧ್ಯಾಯದಲ್ಲಿ ಆಸಕ್ತಿ ಇರುವುದನ್ನು ಕಂಡ ಶ್ರವಣಬೆಳಗೊಳದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1998ರಲ್ಲಿ ಸಪ್ತಮ ಪ್ರತಿಮಾಧಾರಿಯಾಗಿ ವ್ರತೋಪದೇಶ ನೀಡಿ ಬ್ರಹ್ಮಚಾರಿಗಳನ್ನಾಗಿಸಿದರು.
⭕ಧಾರ್ಮಿಕ ಅಧ್ಯಯನದಲ್ಲಿ ನಿರತರಾದ ಅವರು ವಿಚಾರ ಪಟ್ಟದ ಕ್ಷುಲ್ಲಕ ದೀಕ್ಷೆಯನ್ನು ಪಡೆದರು. ಬಿಜಾಪುರದ ಮಹೇಂದ್ರಗಿರಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ಹೇಮಕೀರ್ತಿ ಸ್ವಾಮಿಗಳಾಗಿ ವಿರಾಜಮಾನರಾದರು. ಬಳಿಕ ಶ್ರೀ 1008 ಸಹಸ್ರಫಣಿ ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಸಮಿತಿಯ ಅಧ್ಯಕ್ಷರಾಗಿ ಆ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು.
⭕ದಿನಾಂಕ 29-08-1999ರಲ್ಲಿ ಸ್ವಾಧ್ಯಾಯಪ್ರಿಯ, ಮೇಧಾವಿ ಮತ್ತು ಸಮರ್ಥ ಗುರು ಶ್ರವಣಬೆಳಗೊಳ ಭಟ್ಟಾರಕರಿಂದ ದೀಕ್ಷಾ ಬದ್ಧರಾದ ಶ್ರೀಗಳು ಜೈನ ಆಗಮಗಳ ತೌರೂರಾದ ಮೂಡಬಿದ್ರೆಯ ಶ್ರೀಮಠದ ಪೀಠಾಧಿಪತಿಗಳಾದರು.ಈ ಮಠವು ನಲ್ಲೂರು, ಹಾಡುವಳ್ಳಿ (ಸಂಗೀತಪುರ) ಹಾಗೂ ಬಿಳಗಿಯಲ್ಲಿ ತನ್ನ ಉಪ ಶಾಖೆಗಳನ್ನು ಹೊಂದಿದೆ.
⭕ಮೂಡಬಿದ್ರೆಯ ಹಿನ್ನಲೆ: ಜೈನ ಧರ್ಮದ ಪವಿತ್ರ 63 ವಿಗ್ರಹಗಳನ್ನು, 4500 ಪದ್ಮ ಪತ್ರಗಳ ಮೇಲೆ ಬರೆದ ಧವಲತ್ರಯಗಳ ಸಾವಿರ ಕಂಬದ ಬಸದಿ ಹೊಂದಿದ ಮೂಡಬಿದರೆ ಶ್ರೀಮಠದ ಭಟ್ಟಾರಕರು ಹೊಯ್ಸಳ, ವಿಜಯನಗರ, ಭೈರವ, ಚೌಟರು, ಬಂಗರು, ಆಗಿಲರು, ಸೀಮಿತರು,ಬಲ್ಲಾಳರು, ಹೆಗ್ಗಡೆ ಮುಂತಾದ ಹಲವಾರು ರಾಜ್ಯ ಮನೆತನದ ರಾಜಗುರುಗಳಾಗಿದ್ದರು.
⭕ಈ ಮಠದ ಗುರುಪೀಠವು 6ನೇ ಶತಮಾನದಿಂದ ಇತ್ತೆಂದು ಅದನ್ನು ಕ್ರಿ. ಶ.1220ರಲ್ಲಿ ಶ್ರವಣಬೆಳಗೊಳದ ಅಂದಿನ ಭಟ್ಟಾರಕರು ಪ್ರಾರಂಭಿಸಿದರೆಂದು ತಿಳಿದು ಬರುತ್ತದೆ.
⭕ ಶ್ರೀಗಳು ಯೋಗ ಪರಿಣತರಾಗಿ, ಸಮಾಲೋಚಕರಾಗಿ, ಶಾಂತಿ ಪಾಲಕರಾಗಿ, ವಿಶ್ವ ಜಾಗತಿಕ ಧರ್ಮಗಳ ಅಧಿವೇಶನ ( ಸ್ವಾಮಿವಿವೇಕಾನಂದ ಭಾಗಿಯಾದ ಸಂಸ್ಥೆ 1885) ಚಿಕಾಗೋ ಇದರ ಜೈನ ಪ್ರತಿನಿಧಿಯಾಗಿ ಸತತ ಆರು ವರ್ಷಗಳಿಂದ(2014) ಪಾಲ್ಗೊಂಡ ಕೀರ್ತಿ ಶ್ರೀಗಳಿಗೆ ಇದೆ.
⭕2005ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯವು ಶ್ರೀಗಳ ಹಸ್ತಪ್ರತಿ ಪಾಲನೆ- ಪೋಷಣೆಗಾಗಿ ಹಾಗೂ ವಾಸ್ತು ಶಾಸ್ತ್ರದ ಅನುಪಮ ಪಾಂಡಿತ್ಯವನ್ನು ಕಂಡು " ಗೌರವ ಡಾಕ್ಟರೇಟ್" ನೀಡಿ ಗೌರವಿಸಿದೆ. ಇದು ಭಟ್ಟಾರಕ ಶ್ರೀಗಳ ಪೈಕಿ ಗೌರವ ಡಾಕ್ಟರೇಟ್ ಪದವಿ ದೊರೆತ ಮೊದಲಿಗರಾಗಿದ್ದಾರೆ.
✈ವಿದೇಶ ಪ್ರವಾಸ:
ಜೈನ ಧರ್ಮದ ಪ್ರಚಾರ ಮತ್ತು ಉಪನ್ಯಾಸ, ಸರ್ವಧರ್ಮ ಸಮ್ಮೇಳನ, ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಪಾಲ್ಗೊಳ್ಳಲು,ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯು. ಕೆ, ಯುಎಸ್ಎ,ಕೆನಡಾ, ಸ್ಪೇನ್, ನ್ಯೂಜಿಲ್ಯಾಂಡ್, ಯುಎಇ, ಜಪಾನ, ಹಾಕಾಂಗ್, ಸಿಂಗಪುರ, ಮಲೇಷಿಯಾ, ನೇಪಾಳ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಉಪನ್ಯಾಸಗಳಿಂದ ಜೈನ ಧರ್ಮದ ಪ್ರಚಾರ -ಪ್ರಸಾರ ಮಾಡಿದ್ದಾರೆ.
⭕ಶ್ರೀಗಳಿಗೆ ಕರ್ನಾಟಕ ಜೈನ ನೌಕರರ ಒಕ್ಕೂಟ ಹಾಗೂ ಕನಾ೯ಟಕ ಜೈನ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಪರವಾಗಿ ಅನಂತಾನಂತ ಶಿರ ಸಾಷ್ಟಾಂಗ ನಮನಗಳು🙏🙏🙏
(ಡಾ. ಅಜಿತ ಮುರುಗುಂಡೆ. ಬೆಂಗಳೂರು.9448936461)



Summaguttu Bandashale, Bajagoli, Udipi District, Karnataka

Monday, March 14, 2022

Mangaluru: Karnataka governor Thaver Chandra Gehlot visits Jain math

Mangaluru: Karnataka governor Thaver Chandra Gehlot visits Jain math: Daijiworld Media Network – Mangaluru (EP)Mangaluru, Mar 14: The governor of Karnataka Thaver Chandra Gehlot visited the Jain temple here at 4 PM on Monday, March 14. He obtained Dhavala Traya Grantha Jina, Bimba darshana, offered Vinaya Pooja, had a look at ancient writings and was glad. He unveiled the plaques of J.....

Saturday, October 30, 2021

ವಾರ್ತಾ ವಾಹಿನಿ ನಿರೂಪಕಿ ಶುಭ ಶ್ರೀ ಜೈನ್ ಬೆಳುವಾಯಿ ಶ್ರೀ ಮಠ ದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ 24.10.2021ಹರಸಿ ಆಶೀರ್ವಾದ



 Tv9 ವಾರ್ತಾ ವಾಹಿನಿ ನಿರೂಪಕಿ ಶುಭ ಶ್ರೀ ಜೈನ್ ಬೆಳುವಾಯಿ ಇವರು ಶ್ರೀ ಜೈನ ಮಠದಲ್ಲಿ ಭಗ ವಾನ್ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ ನೆರವೇರಿಸಿ ನವ ತೀರ್ಥoಕರ ಆರಾಧನೆಯಲ್ಲಿ ಪಾಲ್ಗೊಂಡು ಮೂಡು ಬಿದಿರೆ ಚಾ ತುರ್ಮಸ ನಿರತ ದಿವ್ಯ ಸಾಗರ ಮುನಿ ರಾಜ ರ ಹಾಗೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಗಳವರ ಆಶೀರ್ವಾದ ಪಡೆದರು ಈ ಸಂಧರ್ಭ ಅವರನ್ನು ಪೂಜ್ಯ ಸ್ವಾಮೀಜಿ ಶ್ರೀ ಮಠ ದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ 24.10.2021ರಂದು ಮಧ್ಯಾಹ್ನ ಶಾಲು ಹಾರ ಸ್ಮರಣಿಕೆ  ನೀಡಿ  ಹರಸಿ ಆಶೀರ್ವಾದ ಮಾಡಿದರು, ಅವರ ತಂದೆ ಭುಜಬಲಿ, ಹಿರಿಯ ರಾದ ನಾಗರಾಜ್ ಜೈನ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಜೈನಕಾಶಿ ಯ 18 ಪ್ರಾಚೀನ ಬಸದಿ ಗಳ ಪೈಕಿ ಶೆಟ್ರ ಬಸದಿ ಹಾಗೂ ಬೆಟ್ಕೇರಿ ಬಸದಿ ಬಿಂಬ ಶುದ್ದಿ, ವಿಮಾನ ಶುದ್ಧಿ

 ಜೈನಕಾಶಿ ಯ 18 ಪ್ರಾಚೀನ ಬಸದಿ ಗಳ ಪೈಕಿ ಶೆಟ್ರ ಬಸದಿ ಹಾಗೂ ಬೆಟ್ಕೇರಿ ಬಸದಿ ಭಗವಾನ್ ೧00೮ ಶ್ರೀ ಶ್ರೀ ಶ್ರೀ ಮಹಾವೀರ ಸ್ವಾಮಿ ಬಿಂಬ ಶುದ್ದಿ, ವಿಮಾನ ಶುದ್ಧಿ ಜಿನ ಆಗಮೋಕ್ತ ಕಾರ್ಯಕ್ರಮ ವು 108 ದಿವ್ಯ ಸಾಗರ ಮುನಿ ರಾಜರ ಪಾವನ ಸಾನ್ನಿಧ್ಯ ದಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಗಳವರ ಮಾರ್ಗದರ್ಶನ ಉಪಸ್ಥಿತಿ ಯಲ್ಲಿ ದಿನಾಂಕ 29.10.21ಹಾಗೂ 03.11.21 ರಂದು ಜಿನ ಆಗಮೋಕ್ತ ರೀತಿಯಲ್ಲಿ ಜರುಗಲಿದೆ ತಾವು ಆಗಮಿಸಿ ಜಿನ ಗoದೋದಕ ಸ್ವೀಕರಿಸಿ ಧರ್ಮ ಲಾಭ ಪಡೆಯಬೇಕಾಗಿ ವಿನಂತಿ

ಕಾರ್ಯಕ್ರಮ ವಿವರ
ವಿಮಾನ ಶುದ್ಧಿ ಹಾಗೂ ಬಿಂಬ ಶುದ್ಧಿ ವಿಧಾನ





ಶ್ರೀ ಮಹಾವೀರ ಸ್ವಾಮಿ, ಶೆಟ್ರ ಬಸದಿ
ಶ್ರೀ ಮಹಾವೀರ ಸ್ವಾಮಿ, ಬೆಟ್ಕೇರಿ ಬಸದಿ
ಶೆಟ್ರ ಬಸದಿ ಮೂಡು ಬಿದಿರೆ
◆ತಾ.29.10.2021 ಶುಕ್ರವಾರ ಬೆಳಿಗ್ಗೆ ಗಂಟೆ 07.25 ರ ತುಲಾ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನ ಶುದ್ಧಿ ವಿಧಾನ, ಬಿಂಬ ಶುದ್ಧಿ ವಿಧಾನ, ದಿವಾ ಗಂಟೆ 12.05- 12.35ರೊಳಗೆ ಮಂತ್ರನ್ಯಾಸ.
ವಿಧಾನ.
ಮುಖ ವಸ್ತ್ರ ಉದ್ಘಾಟನೆ, ನವ ಕಳಶ ಅಭಿಷೇಕ
🕉️🕉️🕉️🕉️🕉️
ಬೆಟ್ಟ ಕೇರಿ ಬಸದಿ
◆ತಾ.03.11.2021 ಬುಧವಾರ ಬೆಳಿಗ್ಗೆ ಗಂಟೆ 07.05 ರ ತುಲಾ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನ ಶುದ್ಧಿ ವಿಧಾನ, ಬಿಂಬ ಶುದ್ಧಿ ವಿಧಾನ, ದಿವಾ ಗಂಟೆ 11.25- 11.55ರೊಳಗೆ ಮಂತ್ರನ್ಯಾಸ. ಮುಖ ವಸ್ತ್ರ ಉದ್ಘಾಟನೆ, ನವ ಕಳಶ ಅಭಿಷೇಕ
ಶ್ರೀ ಜೈನ ಮಠ ದ ಪರವಾಗಿ
ಸರ್ವರಿಗೂ ಆದರದ ಸ್ವಾಗತ ಬಯಸುವ
ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್
ಬಸದಿ ಮುಕ್ತಸರ ರು ಮೂಡುಬಿದಿರೆ
ಹಾಗೂ
ಶ್ರೀ ಸಂಜಯಂಥ ಕುಮಾರ್ ಶೆಟ್ಟಿ ವ್ಯವ ಸ್ಥಾಪಕರು ಶ್ರೀ ಜೈನ ಮಠ ಮೂಡು ಬಿದಿರೆ

JAINKASHI MOODABIDRE IMPORTANT FESTIVAL

 ಜನವರಿ.2022

15 ಮಕರ ಸಂಕ್ರಮಣ ಶ್ರೀ ಮಠ, ಸಾವಿರ ಕಂಬ ಬಸದಿ ಯಲ್ಲಿ ವಿಶೇಷ ಪೂಜೆ
.2ನೇ ಶನಿವಾರ .ಮೂಡುಬಿದಿರೆ ಅಮ್ಮನವರ ಬಸದಿ ರಥೋತ್ಸವ
ಫೆಬ್ರವರಿ..ತಾ...ಮಾಘ ತ್ರಯೋದಶಿ ...ಮೂಡುಬಿದಿರೆ ಬಡಗುಬಸದಿ ರಥೋತ್ಸವ
ಮಾರ್ಚ್.ಫಾಲ್ಗುಣ ಬಹುಳ ದಶಮಿ .ತಾ.ಮೂಡುಬಿದಿರೆ ಗುರುಬಸದಿ ವಾರ್ಷಿಕೋತ್ಸವ
ಎಪ್ರಿಲ್..ತಾ..ಚೈತ್ರ ತ್ರಯೋದಶಿ.(ಕ್ಯಾಲೆಂಡರ್ ನೋಡ ಬೇಕು ).ಮೂಡುಬಿದಿರೆಯಲ್ಲಿ ಭ| ಮಹಾವೀರ ಜಯಂತಿ
ಚತುರ್ಥಿ ಕಿರಿಯ ರಥ
ಹುಣ್ಣಿಮೆ
ಹಿರಿಯ ರಥ
🕉️
ಮೇ ತಿಂಗಳು
ಅಕ್ಷಯ ತೃತೀಯ ಶ್ರೀಜೈನ ಮಠ ದಲ್ಲಿ ವಿಶೇಷ ಪೂಜೆ
🕉️
... ..ಜೇಷ್ಠ ಶುದ್ಧ ಪಂಚಮಿ
ಮೂಡುಬಿದಿರೆಯಲ್ಲಿ ಶ್ರುತ ಪಂಚಮಿ ಆರಾಧನೆ
🕉️
ಜೂನ್..ಆಷಾಢ ಚತುರ್ಥಿ.. ಮೂಡುಬಿದಿರೆ
ಜೈನಮಠದಲ್ಲಿಚಾತುರ್ಮಾಸ ಪ್ರಾರಂಭ
ಗುರು ಪೂರ್ಣಿಮೆ
ವೀರ ಶಾಶಾನ ಜಯಂತಿ
🕉️
ಜೂಲೈ
ಕೆರೆ ಬಸದಿ, ಬಾಗಿನ ಸಮರ್ಪಣೆ
🕉️
18 ಬಸದಿ ಯಲ್ಲಿ ನಾಗರ ಪಂಚಮಿ ತನು ಹೊಯ್ಯು ವ ಕಾರ್ಯಕ್ರಮ ನಾಗ ಪೂಜೆ
🕉️
ಮಕುಟ ಸಪ್ತಮಿ
ಭಗವಾನ್ ಪಾರ್ಶ್ವ ನಾಥ ಮೋಕ್ಷ ಕಲ್ಯಾಣ
🕉️
ಗುರು ಬಸದಿ
ಮಹಾ ಅಭಿಷೇಕ
ಶ್ರೀ ಜೈನ ಮಠ ದಲ್ಲಿ ಭಟ್ಟಾರಕ ಶ್ರೀ ಗಳಿಂದ ನಿರ್ವಾಣಪೂಜೆ ಮಹಾ ಅರ್ಘ್ಯ ಸಮರ್ಪಣೆ
🕉️
ನೂಲ ಹುಣ್ಣಿಮೆ (ರತ್ನ ತ್ರಯ ಸೂತ್ರ ಧಾರಣೆ )
🕉️
ಆಗಸ್ಟ್ 29.2022.ಮೂಡುಬಿದಿರೆ ಭಟ್ಟಾರಕ ಶ್ರೀ 23ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ
🕉️
ರಮಾರಾಣಿ ಶೋದ
ಸಂಸ್ಥಾನ ದಲ್ಲಿ ಶಿಕ್ಷಕರ ದಿನ 05. ಸೆಪ್ಟೆಂಬರ್
🕉️
ಬೆನಕನ ಅಮಾವಾಸ್ಯೆ ಶ್ರೀ ಮಠ ದಲ್ಲಿ ಶಾಂತಿ ವಿಧಾನ, ಹವನ
🕉️
ಷೋಡಶ ಕಾರಣ ವ್ರತ
16 ದಿನ ಗಳ 16ಭಾವನೆ ಪೂಜೆ
ಮೌನ ವ್ರತ( ಒಂದು ದಿನ )ಭಾದ್ರಪದ ಶುಕ್ಲ ಏಕ
ದ್ವಿತೀಯ ಚಾರಿತ್ರ ಚಕ್ರವರ್ತಿ 20ನೇ ಶತಮಾನದ ಪ್ರಥಮ ಆಚಾರ್ಯ 108 ಶಾಂತಿ ಸಾಗರ ಪುಣ್ಯ ತಿಥಿ
ಭಾದ್ರಪದ ಶುಕ್ಲ ಚತುರ್ಥಿ ಯಿಂದ ಪ್ರಾರಂಭ ವಾಗಿ 10ದಿನ ಗಳ ಪರ್ಯಂತ ಪರ್ವ ರಾಜ ದಶಲಕ್ಷಣ ಪರ್ವ ಆಚರಿಸ ಲಾಗುತ್ತ ದೆ ಹುಣ್ಣಿಮೆ ಗೆ ಸಮಾಪನ ಗೊಳ್ಳುತ್ತದೆ
🕉️🌼🕉️🌴🕉️
ಉತ್ತಮ ಕ್ಷಮೆ
ಉತ್ತಮ ಮಾರ್ಧ ವ ಧರ್ಮ
ಉತ್ತಮ ಅರ್ಜವ
ಉತ್ತಮ ಶೌಚ
ಉತ್ತಮ ಸತ್ಯ
ಸುಗಂಧ ದಶಮಿ
ಉತ್ತಮ ಸಂಯಮ
ಉತ್ತಮ ತಪ
ಉತ್ತಮ ತ್ಯಾಗ
ಅನಂತ ನೋಂಪಿ
ಪ್ರಥಮ ದಿನ
🕉️
ಉತ್ತಮ ಅಕಿoಚನ್ಯ
ಅನಂತ ನೋಂಪಿ
ಮಧ್ಯ 2ನೇ ಯ ದಿನ
🕉️
ಉತ್ತಮ ಬ್ರಹ್ಮಚರ್ಯಾ
ಧರ್ಮ
ಅನಂತ ನೋಂಪಿ
ಕೊನೆ ಯ ದಿನ
🕉️
ಶರನ್ನವರಾತ್ರಿ ಪಾಡ್ಯ
ನವ ರಾತ್ರಿ ಪೂಜೆ ಆರಂಭ ಶ್ರೀ ಜೈನ ಮಠ
ಲೆಪ್ಪದ ಬಸದಿ
ಬೆಂಕಿ ಬಸದಿ ಸರಸ್ವತಿ ಮಂಟಪ
🕉️🕉️🕉️🕉️2022
ನಲ್ಲೂರುಕ್ಷೇತ್ರ ದಲ್ಲಿ ಕೂಶ್ಮಾ 0ಡಿ ನಿ
ದೇವಿ ಕೂರ್ಮ ಶ್ರೀ ಪೀಠ ಸಿಂಹಾಸನ ರೋಹಣ
ತೆನೆ ಹಬ್ಬ, ಮೂಡುಬಿದಿರೆ ಶ್ರೀ ಗಳ ವತಿಯಿಂದ ನಲ್ಲೂರು ಬಸದಿ
ರಾತ್ರಿ ಅಷ್ಟಾ ವ ದಾನ ಸೇವೆ ನವ ರಾತ್ರಿ ಪೂಜೆ
ನವ ರಾತ್ರಿ ಪೂಜೆ ಆರಂಭ
12.10.21
ಸ್ವಸ್ತಿಶ್ರೀ ಶ್ರೀ ಗಳಿಂದ
ಜಿನ ವಾಣಿ ಸರಸ್ವತಿ ಪೂಜೆ ಶ್ರೀ ಮಠ ದಲ್ಲಿ ಪ್ರಾಚೀನ ಗ್ರಂಥ ಗಳ ಪೂಜೆ ಗ್ರಂಥ
ಸ್ವಾಧ್ಯಯ
🌼🌼🌼
8ನೇ ದಿನ ಜೈನ ಕಾಶಿ ಮೂಡು ಬಿದಿರೆ ಯಲ್ಲಿ ಜೀವ ದಯಾ ಅಷ್ಟಮಿ 18 ಬಸದಿ ದರ್ಶನ ವಿಶೇಷ ಪೂಜೆ
.
🌺🌺🌺
15.10.21
ಶ್ರೀ ಮಠ ಮೂಡುಬಿದಿ ರೆ ಯಲ್ಲಿ ಕದಿರು ಹಬ್ಬ
ತೆನೆ ಕಟ್ಟಿ ಶ್ರೀ ಮಠ ದಲ್ಲಿ ವಿಶೇಷ ಪೂಜೆ
ಗಣಧರ ಪೂಜೆ
ಗದ್ದುಗೆ ಪೂಜೆ
ಗುರು ಬಸದಿ ಶ್ರೀ ಗಳ ಚಂದನ ಪೀಠ ಸಿoಹಾಸನ ರೋಹಣ ಗುರುಚರಣ,ಪಾದ ಪೂಜೆ
ರಾತ್ರಿ ನಲ್ಲೂರು ಬಸದಿ ಯಲ್ಲಿ ಉತ್ಸವ
🌼🌼🌼🌼
ಭಗವಾನ್ ಮಹಾವೀರ ನಿರ್ವಾಣ ಪೂಜೆ 2022
ದೀಪಾವಳಿ.ಅಮಾವಾಸ್ಯೆ .2549ನೇ ವೀರ ನಿರ್ವಾಣ ಸಂವತ್ಸರ ಪ್ರಾರಂಭ
ಕಾರ್ತೀಕ
ಅಷ್ಟಾಹ್ನಿ ಕಾ
ನಂದೀಶ್ವರ 8 ದಿನಗಳ ಪೂಜೆ ಆರಂಭ
ಕಾರ್ತೀಕ ಮಾಸ ಅಷ್ಟಮಿ ಯಿಂದ ಹುಣ್ಣಿಮೆ ವರೆಗೆ
ನವೆಂಬರ್ 🕉️🕉️2022
ಗುರುಬಸದಿ ಯಲ್ಲಿ
ಶ್ರೀ ಮಠ ದಿಂದ
ಮಂದಾರ ಅಭಿಷೇಕ
🌼🌼🌼🌼🌼🌼
ಧನುರ್ ಮಾಸದ ಪೂಜೆ ಪ್ರತಿ ಮಂಗಳವಾರ /ರವಿ ವಾರ
ಒಂದು ತಿಂಗಳ ನಗರ ದೇವತೆ ಗಳ ನಾಲ್ಕು ಪ್ರಾಚೀನ ಬಸದಿ ಗಳ ಜೈನ ಕಾಶಿ ಯ ಗಡಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕು ಗಳ ಬಸದಿಗಳಲ್ಲಿ ಪೂಜೆ
ಕ್ರಮ ವಾಗಿ
ಗುರು ಬಸದಿ ಮೊದಲ ಪೂಜೆ ಶ್ರೀ ಮಠ ದಿಂದ
🕉️
೨ ನೇ ಪೂಜೆ ಗುರು ಬಸದಿ ಯಲ್ಲಿ ಸೇವೆ ಊರ ಹತ್ತು ಸಮಸ್ತ ರಿಂದ
🌺🌺🌺🌺🌺🌺
೩ನೇ ಪೂಜೆ ಸಾವಿರ ಕಂಬ ಬಸದಿ
೪ನೇ ಪೂಜೆ ಬಡಗ ಬಸದಿ
೫ ನೇ ಪೂಜೆ
ಬೆಟ್ಕೇರಿ ಬಸದಿ
೬ ನೇ ಪೂಜೆ
ಕೆರೆ ಬಸದಿ ಯಲ್ಲಿ ಶ್ರೀ ಶ್ರೀ ಗಳ ಮಾರ್ಗದರ್ಶನ ದಲ್ಲಿ
ವಿಶ್ವ ಶಾಂತಿ ಪ್ರಾರ್ಥನೆ
ಅಭಿಷೇಕ, ಪೂಜೆ
ಡಿಸೆಂಬರ್ 15..ಮೂಡುಬಿದಿರೆ ಲೆಪ್ಪದ ಬಸದಿಯಲ್ಲಿ ಅಟ್ಟಳಿಗೆ ಅಭಿಷೇಕ
ಡಿಸೆಂಬರ್ 25..2022
ಮೂಡುಬಿದಿರೆ ಸಾವಿರ ಕಂಬದಬಸದಿ ಲಕ್ಷ ದೀಪೋತ್ಸವ
COLLECT BY






JAINMATH MOODABIDIRE BASADHI HEAD OFFICE